• 7 years ago
'ಅಮೇರಿಕಾ ಅಮೇರಿಕಾ' ಸಿನಿಮಾ ನೋಡಿದ ಪ್ರತಿಯೊಬ್ಬರು ಭೂಮಿ ಪಾತ್ರದ ನಾಯಕಿಯನ್ನ ತುಂಬಾ ಇಷ್ಟ ಪಟ್ಟಿದ್ದರು. 'ದೊರೆ', 'ಅಮೇರಿಕಾ ಅಮೇರಿಕಾ', 'ರವಿಮಾಮ' ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಹೇಮಾ ಪಂಚಮುಖಿ ಮದುವೆ ಆಗಿದ್ದಾರೆ. ಅರೆ, ಈ ಹಿಂದೆಯೇ ಅವರಿಗೆ ಮದುವೆ ಆಗಿತಲ್ವಾ ಅಂತ ಯೋಚನೆ ಮಾಡಬೇಡಿ..ನಟಿ ಹೇಮಾ 'ರಂಗೋಲಿ' ಸಿನಿಮಾದಲ್ಲಿ ಅಭಿನಯಿಸಿದ ನಟ ಪ್ರಶಾಂತ್ ರನ್ನ ಎರಡನೇ ಮದುವೆ ಆಗಿದ್ದಾರೆ. ಈ ವಿಚಾರವನ್ನ ಖುದ್ದು ಹೇಮಾ ಅವರೇ ತಮ್ಮ ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಹಿಂದೆಯೇ ಹೇಮಾ ಅವರಿಗೆ ಮದುವೆಯಾಗಿತ್ತು, ಆದರೆ ಎರಡು ದಿನಗಳ ಹಿಂದೆಯಷ್ಟೇ ಪ್ರಶಾಂತ್ (ಸುಮಂತ್ )ರನ್ನ ಮದುವೆ ಆಗಿರುವುದಾಗಿ ತಿಳಿಸಿದ್ದಾರೆ. ನಟಿ ಹೇಮಾ 'ರವಿಮಾಮ' ಸಿನಿಮಾದಲ್ಲಿ ಅಭಿನಯಿಸಿದ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸ್ವಮೇಂದ್ರ ಪಂಚಮುಖಿ ಅವರನ್ನ ಮದುವೆಯಾಗಿ ವಿದೇಶದಲ್ಲಿ ವಾಸವಾಗಿದ್ರು. ಇತ್ತೀಚಿನ ದಿನಗಳಲ್ಲಿ ಹೇಮಾ ಬೆಂಗಳೂರಿನಲ್ಲೇ ನಾಟ್ಯಶಾಲೆ ನಡೆಸುತ್ತಿದ್ದರು. ಕಳೆದ ಎರಡು ದಿನದ ಹಿಂದೆಯಷ್ಟೇ ಹೇಮಾ ನಟ ಪ್ರಶಾಂತ್ ಗೋಪಾಲ ಸ್ವಾಮಿಯವರನ್ನ ಮದುವೆ ಆಗಿದ್ದಾರೆ.

Kannada actress Hema Panchamukhi got second marriage, Rangoli Cinema Hero Prashant married to Hema Panchamukhi. Hema Panchamukhi has updated on Facebook about this.

Recommended