• 8 years ago
'ಮಫ್ತಿ' ಸಿನಿಮಾದ ಈಗಾಗಲೇ ಸೂಪರ್ ಹಿಟ್ ಹಿಟ್ ಆಗಿದೆ. ಸಿನಿಮಾವನ್ನು ಜನ ಅಪ್ಪಿಕೊಂಡಿದ್ದಾರೆ. ಅದರ ಜೊತೆಗೆ ಸಿನಿಮಾದ ಓಪನ್ ಎಂಡಿಂಗ್ ಕ್ಲೈಮ್ಯಾಕ್ಸ್ ನೋಡಿದವರು ಚಿತ್ರದ ಮುಂದುರವರೆದ ಭಾಗವಾಗಿ ಪಾರ್ಟ್ 2 ಬರುತ್ತದೆಯಾ ಎಂಬ ಕುತೂಹಲದಲ್ಲಿ ಇದ್ದರು. ಆದರೆ ಈಗ ಈ ಬಗ್ಗೆ ಸ್ವತಃ ಚಿತ್ರದ ನಾಯಕ ಶ್ರೀ ಮುರಳಿ ಮಾತನಾಡಿದ್ದಾರೆ.''ಮಫ್ತಿ 2' ಸಿನಿಮಾವನ್ನು ಸದ್ಯದಲ್ಲಿ ಮಾಡುವ ಆಲೋಚನೆಯಿಲ್ಲ. ನನ್ನ ಹಿಂದಿನ ಬದ್ಧತೆಗಳನ್ನು ಮುಗಿಸಿದ ನಂತರ 'ಮಫ್ತಿ'ಯ ಮುಂದುವರಿದ ಭಾಗವನ್ನು ಕೈಗೆತ್ತಿಕೊಳ್ಳುತ್ತೇವೆ. ಇಂದಿನ ಕಾಲದ ಜನರು ಇಷ್ಟಪಡುವ ಚಿತ್ರ ಮಫ್ತಿಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಎರಡನೇ ಭಾಗವನ್ನು ಮಾಡುವ ಯೋಜನೆಯಿದೆ'' ಎಂದು ಶ್ರೀ ಮುರಳಿ ಹೇಳಿದ್ದಾರೆ. ಕಳೆದ ಶುಕ್ರವಾರ ತೆರೆಗೆ ಬಂದ 'ಮಫ್ತಿ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಇದರಿಂದ ಸಂತಸದಲ್ಲಿರುವ ಶ್ರೀ ಮುರಳಿ 'ಮಫ್ತಿ 2' ಮಾಡುವ ಪ್ಲಾನ್ ನಲ್ಲಿ ಇದ್ದಾರೆ.

Category

🗞
News

Recommended