ಆಟಿ 18 ಎಂದರೆ ಕೊಡಗಿನವರಿಗೆ ತುಂಬಾನೇ ವಿಶೇಷ. ಅಲ್ಲಿಯ ಪ್ರತಿ ಮನೆಯಲ್ಲೂ ಆಟಿ ಪಾಯಸ ಘಮ್ ಅಂತ ಸುವಾಸನೆ ಬೀರುತ್ತಿರುತ್ತದೆ. ವರ್ಷಕ್ಕೆ ಒಂದೇ ಬಾರಿ ಮಾಡುವ ಆ ಪಾಯಸ ತುಂಬಾನೇ ವಿಶೇಷ. ಏಕೆಂದರೆ ಆಟಿ ಸೊಪ್ಪು ಬಳಸಿ ಮಾಡುವ ಆ ಪಾಯಸವನ್ನು ನೀವು ತಿನ್ನಬೇಕೆಂದು ಬಯಸಿದರೂ ಬೇರೆ ಸಮಯದಲ್ಲಿ ಸವಿಯಲು ಸಾಧ್ಯವಾಗುವುದಿಲ್ಲ. ಆಟಿ ತಿಂಗಳಿನಲ್ಲಿ 18 ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ಸೇರಿರುತ್ತದೆ ಆ ಗಿಡದಲ್ಲಿ. ನೀವು ಬೇರೆ ಸಮಯದಲ್ಲಿ ಅದರ ಸೊಪ್ಪು ಚಿವುಟಿದರೆ ಯಾವುದೇ ವಿಶೇಷ ವಾಸನೆ ಇರುವುದಿಲ್ಲ. ನೀರಿನಲ್ಲಿ ಬೇಯಿಸಿದರೆ ಕಡು ನೀಲಿ ಬಣ್ಣಕ್ಕೆ ತಿರುಗುವುದೂ ಇಲ್ಲ. ಅದೇ ಆಟಿ ತಿಂಗಳಿನಲ್ಲಿ ಆ ಸೊಪ್ಪಿಗೆ ವಿಶೇಷ ವಾಸನೆ ಸೇರಿಕೊಳ್ಳುತ್ತದೆ. ಪ್ರತಿದಿನವೂ ದಿನವೂ ಒಂದೊಂದು ಬಗೆಯ ಔಷಧಿ ಅದರಲ್ಲಿ ಸೇರುತ್ತಾ ಹೋಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಈ ಆಟಿಸೊಪ್ಪು ಬೇರೆ ಕಡೆ ಸಿಗುವುದು ಕಡಿಮೆ, ಕೊಡಗಿನಲ್ಲಿ ಎಲ್ಲಾ ಕಡೆ ಸಿಗುತ್ತದೆ, ಕೊಡಗಿನ ಸಾಮಗ್ರಿ ಸಿಗುವ ವಸ್ತುಗಳು ಬೆಂಗಳೂರಿನಲ್ಲಿದ್ದರೆ ಅಲ್ಲಿ ನಿಮಗೆ ಈ ಸೊಪ್ಪು ಸಿಕ್ಕರೆ ತಂದು ಖಂಡಿತ ಇದರ ರುಚಿ ನೋಡಿ.
#ಆಟಿ18 #aatipayasam #coorgrecipe #coorg
#ಆಟಿ18 #aatipayasam #coorgrecipe #coorg
Category
🛠️
Lifestyle