• 6 years ago
ಸುಂದರ ಮತ್ತು ಆರೋಗ್ಯಕರ ಶರೀರ ಹೊಂದಿರುವುದು ಎಲ್ಲರ ಕನಸು. ತಲೆಯಿಂದ ಕಾಲಿನ ಉಗುರಿನವರೆಗೆ ಶರೀರದ ಆರೈಕೆ ಮಾಡಿಕೊಳ್ಳಲು ಹಲವು ವಿಧಾನಗಳಿವೆ. ಇದರಲ್ಲಿ ತಮಗೆ ಅತ್ಯಂತ ಸೂಕ್ತವಾದುದನ್ನು ಎಲ್ಲರೂ ಅನುಸರಿಸಲು ಬಯಸುತ್ತಾರೆ. ಆದರೆ ಕೆಲವು ತೊಂದರೆಗಳು ನಮ್ಮ ಇಚ್ಛೆಗೆ ವಿರುದ್ಧವಾಗಿ ನಮ್ಮ ಶರೀರದಲ್ಲಿ ಉಳಿದಿರುತ್ತವೆ. ಚರ್ಮದಲ್ಲಿ ಕಲೆಗಳು, ಬಿಸಿಲಿಗೆ ಗಾಢವಾಗಿರುವ ಚರ್ಮ, ಕಣ್ಣಿನ ಕೆಳಭಾಗದ ಗಾಢವರ್ತುಲಗಳು, ಗೀರುಗಳ ಗುರುತುಗಳು, ಮೊಡವೆ ಮಾಗಿದ ಬಳಿಕ ಉಳಿದ ಗುಳಿಯಂತಹ ಭಾಗ ಮೊದಲಾದವು ಸಜಹಸೌಂದರ್ಯವನ್ನು ಕುಂಠಿತಗೊಳಿಸುತ್ತವೆ. ಆದರೆ ಇದಕ್ಕಾಗಿ ಹತಾಶರಾಗಬೇಕಿಲ್ಲ. ನಿಸರ್ಗ ಇದರ ಆರೈಕೆಗಾಗಿ ಹಲವು ಮೂಲಿಕೆಗಳನ್ನು ನೀಡಿದ್ದು ಇದರ ಸದ್ಭಳಕೆಕೆಯಿಂದ ಸಹಜಸೌಂದರ್ಯ ವೃದ್ಧಿಯಾಗುವುದು ಖಂಡಿತ. ನಿಸರ್ಗ ನೀಡಿರುವ ಗಿಡಮೂಲಿಕೆಗಳಲ್ಲಿ ಲೋಳೆಸರ ಅಥವಾ ಆಲೋವೆರಾ ಒಂದು ಉತ್ತಮ ಆಯ್ಕೆಯಾಗಿದ್ದು ಚರ್ಮದ ಹಲವು ತೊಂದರೆಗಳನ್ನು ನಿವಾರಿಸುವ ಕ್ಷಮತೆ ಪಡೆದಿದೆ. ಇದರ ಗರಿಮೆಯೆಂದರೆ ಇದನ್ನು ಇತರ ನೈಸರ್ಗಿಕ ಸಾಮಾಗ್ರಿಗಳ ಜೊತೆ ಬೆರೆಸಿ ಇದರ ಮೂಲ ಗುಣಗಳಿಗೆ ಬಾಧೆಯಾಗಂತೆ ಮತ್ತು ಆ ಸಾಮಾಗ್ರಿಯ ಉತ್ತಮ ಗುಣಗಳೂ ಕಳೆದುಕೊಳ್ಳದಂತೆ ಮಿಶ್ರಣವಾಗುವುದು. ಇದೇ ಕಾರಣಕ್ಕೆ ಮೊಸರು, ಲಿಂಬೆ, ಗುಲಾಬಿ ನೀರು ಮೊದಲಾದವುಗಳ ಜೊತೆಗೆ ಬೆರೆಸಿ ಬಳಸಿದಾಗ ಎಲ್ಲಾ ಸಾಮಾಗ್ರಿಗಳ ಉತ್ತಮ ಗುಣಗಳು ಚರ್ಮಕ್ಕೆ ಲಭ್ಯವಾಗುತ್ತವೆ....

Recommended