• 6 years ago
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರ ಆಗುವ ಧಾರಾವಾಹಿ ಶನಿ. ಕಲಾವಿದರ ಅಭಿನಯ ಮತ್ತು ತಂತ್ರಜ್ಙಾನದಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆದಿರುವ ಶನಿ ಧಾರಾವಾಹಿಯಲ್ಲಿ ಶನಿಯಷ್ಟೇ ನೋಡುಗರ ಆಕರ್ಷಣೆ ಮಾಡಿರುವ ಪಾತ್ರ ಸೂರ್ಯದೇವ. ಕನ್ನಡಿಗರ ಮನಸ್ಸಿನಲ್ಲಿ ಸೂರ್ಯ ದೇವಾ ಎಂದರೇ ಇವರೇ ಎನ್ನುವಷ್ಟರ ಮಟ್ಟಿಗೆ ಉಳಿದು ಹೋಗಿರುವ ಸೂರ್ಯನ ಪಾತ್ರಧಾರಿ ರಂಜಿತ್ ಈ ಹಿಂದೆ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಉದ್ಯೋಗವನ್ನ ಬಿಟ್ಟು ಹವ್ಯಾಸಕ್ಕಾಗಿ ಬಣ್ಣ ಹಚ್ಚಿದ ರಂಜಿತ್ ಈಗ ರಾಜ್ಯದ ಜನಮನವನ್ನು ಗೆದ್ದಿರುವ ಸೂರ್ಯದೇವ. ಸೂರ್ಯನ ಪಾತ್ರಕ್ಕೆ ರಂಜಿತ್ ಕುಮಾರ್ ತಯಾರಿ ಹೇಗಿತ್ತು? ಈ ಹಿಂದೆ ರಂಜಿತ್ ಅಭಿನಯದ ಪಾತ್ರಗಳು ಯಾವುವು? ಪ್ರತಿ ನಿತ್ಯ ಸೂರ್ಯದೇವಾ ಎಷ್ಟು ತೂಕವಿರುವ ಕಾಸ್ಟ್ಯೂಮ್ಸ್ ಧರಿಸಿ ಅಭಿನಯಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ರಂಜಿತ್ ಈ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.
Kannada serial Shani Surya character actor Ranjith Kumar interview, Shani serial telecasting in Colors Kannada Channel. Raghavendra Hegde is directing the Shani serial

Recommended