• 7 years ago
Kannada actor Darshan starrer Kariya Movie completes fifteen years. The movie was directed by Jogi Prem. This news is now trending on Twitter & Darshan fans are happy celebrating.



ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಹಾಗೂ ಕನ್ನಡದ ಶೋ ಮ್ಯಾನ್ ಡೈರೆಕ್ಟರ್ ಪ್ರೇಮ್ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ ಚಿತ್ರ ಕರಿಯಾ. ದರ್ಶನ್ ಅಭಿನಯದ ಐದನೇ ಸಿನಿಮಾ ಇದಾಗಿದ್ದು ಔಟ್ ಅಂಡ್ ಔಟ್ ಮಾಸ್ ಮಾಸ್ ಸ್ಟೋರಿ ಇದ್ದ ಕರಿಯಾ ಚಿತ್ರವನ್ನ ಕನ್ನಡ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡಾಡಿದ್ದರು.ಆನೇಕಲ್ ಬಾಲ್ ರಾಜ್ ನಿರ್ಮಾಣ ಮಾಡಿದ್ದ ಕರಿಯಾ ಸಿನಿಮಾಗೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದರು. ದರ್ಶನ್ ಜೊತೆಯಲ್ಲಿ ಕಾಲಿವುಡ್ ನಾಯಕಿ ಅಭಿನಯಶ್ರೀ ಅಭಿನಯಿಸಿದ್ದರು. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು.ಕರಿಯಾ ಸಿನಿಮಾ ಬಿಡುಗಡೆಯಾಗಿ ಶತದಿನೋತ್ಸವ ಪೂರೈಸುವುದರ ಜೊತೆಗೆ ಒಳ್ಳೆ ಸಿನಿಮಾಗಳು ಬಿಡುಗಡೆ ಆಗದೇ ಇದ್ದಾಗ ಆ ಜಗಕ್ಕೆ ಇಂದಿಗೂ ಕರಿಯ ಸಿನಿಮಾವನ್ನ ಹಾಕಲಾಗುತ್ತಿದೆ. ಅನೇಕ ಬಾರಿ ಕರಿಯ ಸಿನಿಮಾ ರೀ-ರಿಲೀಸ್ ಆಗಿದೆ. ಕರಿಯ ಚಿತ್ರ ಬಿಡುಗಡೆಯಾಗಿ ಇಂದಿಗೆ ಹದಿನೈದು ವರ್ಷಗಳು ಪೂರೈಸಿವೆ. ಇಂದಿಗೂ ಚಿತ್ರ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಪ್ರೇಕ್ಷಕರ ಮನಸ್ಸಿನಲ್ಲಿ ಕರಿಯ ಚಿತ್ರ ಹೇಗೆ ನೆನಪಿನಲ್ಲಿದೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ.

Category

🗞
News

Recommended