• 7 years ago
Tollywood Actor Ravi Teja's Brother Bharath Dies in Car Accident. For more information watch this video

ಟಾಲಿವುಡ್ ಚಿತ್ರರಂಗದ ಜನಪ್ರಿಯ ನಟ ರವಿತೇಜ ಅವರ ಕಿರಿಯ ಸಹೋದರ ಭರತ್ (46) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ಬಳಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಹೈದರಾಬಾದ್ ನಿಂದ 50 ಕಿ.ಮೀ ದೂರದಲ್ಲಿರುವ ಶಮ್ಶಾಬಾದ್ ಮಂಡಲ್ ಎಂಬಲ್ಲಿ ಅಪಘಾತ ಸಂಭವಿಸಿದೆ.

ವೇಗವಾಗಿ ಚಲಿಸುತ್ತಿದ್ದ ಭರತ್ ಅವರ ಕಾರು ಬಂದು ನಿಂತಿರುವ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಭರತ್ ಅವರ ಪ್ರಾಣ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಕಾರನ್ನು ವೇಗವಾಗಿ ಚಲಿಸಿದ್ದೇ ಅಪಘಾತಕ್ಕೆ ಕಾರಣ ಅಂತ ಪೊಲೀಸ್ ವರದಿಯಿಂದ ತಿಳಿದು ಬಂದಿದೆ.

ಈ ಹಿಂದೆ ಡ್ರಗ್ಸ್ಸೇವನೆ ಮತ್ತು ಸ್ಮಗ್ಲಿಂಗ್ ಆರೋಪದಲ್ಲಿ ಭರತ್ ಅವರನ್ನು ಬಂಧಿಸಲಾಗಿತ್ತು. ತಿರುಮಲ ತಿರುಪತಿಯಲ್ಲಿ ಧೂಮಪಾನ ಮಾಡಿ ದಂಡತೆತ್ತಿದ್ದರು. ಹಿಂದೊಮ್ಮೆ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಭರತ್ ನನ್ನು ಪೊಲೀಸರು ತಡೆದು ವಿಚಾರಿಸಿದಾಗ ಅವರ ಮೇಲೆ ಕೈ ಮಾಡಿದ ಆರೋಪದ ಮೇಲೆ ವಶಕ್ಕೆ ಪಡೆದಿದ್ದರು. 46 ವರ್ಷ ವಯಸ್ಸಿನ ಭರತ್ ಕೆಲ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


Recommended