ಚಾಮರಾಜನಗರ : ಲಾರಿ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನ ಕಾಲಿಗೆ ಹಾವೊಂದು ಸುತ್ತಿಕೊಂಡಿರುವ ಘಟನೆ ಯಳಂದೂರು ತಾಲೂಕಿನ ಯರಿಯೂರು ಬಳಿ ಗುರುವಾರ ನಡೆದಿದೆ. ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ಲೋಡ್ ತುಂಬಿಕೊಂಡು ಸದ್ದಾಂ ಎಂಬ ಚಾಲಕ ಲಾರಿ ಚಾಲನೆ ಮಾಡುವಾಗ ದಿಢೀರ್ ಎಂದು ಕ್ಯಾಬಿನ್ನಿಂದ ಕೇರೆ ಹಾವೊಂದು ಬಂದು ಕಾಲಿಗೆ ಸುತ್ತಿಕೊಂಡಿದೆ. ಈ ವೇಳೆ ಎದುರಿನಿಂದ ಹಾಗೂ ಹಿಂಬದಿಯಿಂದ ಬಸ್, ಬೈಕ್ ಬರುವುದನ್ನು ಕಂಡಿರುವ ಚಾಲಕ ಗಾಬರಿಗೊಳಗಾಗದೇ ಲಾರಿಯನ್ನು ರಸ್ತೆಬದಿ ನಿಲ್ಲಿಸಿ ಅವಘಡವೊಂದನ್ನು ತಪ್ಪಿಸಿದ್ದಾರೆ. ಇದಾದ ಬಳಿಕ ವಿಷಯ ತಿಳಿದು ಉರಗ ರಕ್ಷಕ ಸ್ನೇಕ್ ಮಂಜು ಸ್ಥಳಕ್ಕೆ ದೌಡಾಯಿಸಿ, ಕ್ಯಾಬಿನ್ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿದ್ದಾರೆ. ಈ ಬಳಿಕ ಉರಗ ರಕ್ಷಕ ಸ್ನೇಕ್ ಮಂಜು ಅವರು ಮಾತನಾಡಿದ್ದು, ಚಾಲಕನ ಕಾಲಿಗೆ ಹಾವು ಸುತ್ತಿಕೊಂಡ ಬಳಿಕ ಚಾಲಕ ತಕ್ಷಣಕ್ಕೆ ಗಾಬರಿಗೊಂಡು ಲಾರಿಯನ್ನು ನಿಲ್ಲಿಸಿದ್ದರೆ ಹಿಂದಿನಿಂದ ಬರುತ್ತಿದ್ದ ವಾಹನಗಳು ಡಿಕ್ಕಿ ಹೊಡೆದುಕೊಳ್ಳಬೇಕಿತ್ತು. ಸಮಯ ಪ್ರಜ್ಞೆಯಿಂದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿರುವುದು ಶ್ಲಾಘನೀಯ ಎಂದಿದ್ದಾರೆ.ಇದನ್ನೂ ಓದಿ : ತುಮಕೂರಿನ ಸಿದ್ದಗಂಗಾ ಮಠದಲ್ಲಿ 8 ಅಡಿ ಉದ್ದದ ಹೆಬ್ಬಾವು: ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ತಜ್ಞರು - 8 FEET LONG PYTHON CAUGHT
Category
🗞
News