ಹಾವೇರಿ: ಟೋಲ್ ಗೇಟ್ ಹಾಕಿದ್ದರೂ ದ್ವಿಚಕ್ರ ವಾಹನ ಚಾಲನೆ ಮಾಡಿದ್ದರಿಂದ ಹಿಂಬದಿ ಕುಳಿತಿದ್ದ ಸವಾರನ ಪತ್ನಿಯ ತಲೆಗೆ ಟೋಲ್ಗೇಟ್ ತಡೆಗಂಬ ಬಡಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ನಲ್ಲಿ ನಡೆದಿದೆ.ಮಲ್ಲಿಕಾರ್ಜುನ ಎಂಬುವರ ಪತ್ನಿ ಗಿರಿಜಮ್ಮ ಹಾವೇರಿ (48) ಅಪಘಾತದಲ್ಲಿ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಪತಿ ದಾವಣಗೆರೆಗೆ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯ ಟೋಲ್ಗೇಟ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಕೂಟಿ ಸವಾರನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಿಸಿಟಿವಿಯಲ್ಲೇನಿದೆ? ದ್ವಿಚಕ್ರ ವಾಹನ ಸವಾರ ಮಲ್ಲಿಕಾರ್ಜುನ ಹಾವೇರಿ ಅವರು ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿಕೊಂಡು ಟೋಲ್ಗೇಟ್ ಹಾಕಿದ್ದರೂ ಪಕ್ಕದ ರಸ್ತೆಯಲ್ಲಿ ಸಂಚರಿಸಿದೇ, ಟೋಲ್ ರಸ್ತೆಯಲ್ಲಿ ಹೋಗಿದ್ದಾರೆ. ಈ ವೇಳೆ ಸವಾರ ಟೋಲ್ಕಂಬದಿಂದ ತಪ್ಪಿಸಿಕೊಂಡರೆ, ಹಿಂಬದಿ ಕುಳಿತಿದ್ದ ಪತ್ನಿ ಗಿರಿಜಮ್ಮ ಅವರಿಗೆ ತಡೆಗಂಬ ಬಡಿದು ಕೆಳಗೆ ಬಿದ್ದಿದ್ದಾರೆ. ಪರಿಣಾಮ ಸಾವನ್ನಪ್ಪಿದ್ದಾರೆ. ಪತಿಗೆ ಯಾವುದೇ ಗಾಯಗಳಾಗಿಲ್ಲ.ಈ ಕುರಿತು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಮನಗರ: ಬೈಕ್-ಕೆಎಸ್ಆರ್ಟಿಸಿ ಬಸ್ ಡಿಕ್ಕಿ - ತಂದೆ, ಇಬ್ಬರು ಮಕ್ಕಳು ಸಾವುಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್-ಟ್ರಕ್ ಅಪಘಾತ; 4 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ
Category
🗞
News