• 5 years ago
ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸಲ್ಲ ಹೇಳಿ? ಎಲ್ಲರಿಗೂ ತನ್ನ ಮುಖ ನೋಡಲು ತುಂಬಾ ಚೆನ್ನಾಗಿ ಕಾಣಬೇಕು, ವಯಸ್ಸಾಗುತ್ತಿದ್ದರೂ ಯೌವನ ಕಳೆ ಮಾಸಬಾರದು ಎಂದೇ ಬಯಸುತ್ತಾರೆ. ಆದರೆ ಆಕರ್ಷಕ ತ್ವಚೆ ಬೇಕೆಂದು ಬಯಸುವುದಾದರೆ ಕೆಲವೊಂದು ಸರಳ ಬ್ಯೂಟಿ ಟಿಪ್ಸ್‌ ಪಾಲಿಸಲೇಬೇಕಾಗುತ್ತದೆ. ಹಾಗಂತ ಸೌಂದರ್ಯ ವೃದ್ಧಿಗೆ ದುಬಾರಿ ಕ್ರೀಮ್‌ , ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡುವುದು ಏನೂ ಬೇಕಾಗಿಲ್ಲ, ರಾತ್ರಿ ಮಲಗುವ ಮುನ್ನ ಒಂದಿಷ್ಟು ಸಮಯ ತ್ವಚೆ ಆರೈಕೆಗಾಗಿ ಮೀಸಲಿಟ್ಟರೆ ಸಾಕು, ಮುಖದಲ್ಲಿ ಬೇಗನೆ ನೆರಿಗೆ ಮೂಡುವುದಿಲ್ಲ ಹಾಗೂ ನೈಸರ್ಗಿಕ ಸೌಂದರ್ಯದಿಂದ ನೀವು ಇತರರ ಗಮನ ಸೆಳೆಯುತ್ತೀರಿ. ಇಲ್ಲಿ ನಾವು ನಿಮ್ಮ ತ್ವಚೆ ಸೌಂದರ್ಯ ಕಾಪಾಡಲು ಮಲಗುವ ಮುಂಚೆ ನೀವು ಮಾಡಬೇಕಾದ ತ್ವಚೆ ಆರೈಕೆಗಳೇನು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

Recommended