ಮೊದಲ ಮಗು ಜನಿಸಿ ಸ್ವಲ್ಪ ವರ್ಷಗಳು ಕಳೆದ ಮೇಲೆ ಆ ಮಗುವಿಗೆ ಜತೆಯಾಗಿ ಮತ್ತೊಂದು ಮಗು ಬೇಕೆಂದು ಬಯಸುವುದು ಸಹಜ. ಇಲ್ಲ ಒಂದೇ ಮಗು ಸಾಕು, ಈ ಮಗುವನ್ನೇ ಚೆನ್ನಾಗಿ ಸಾಕಿ ದೊಡ್ಡದು ಮಾಡೋಣ ಎಂದು ದಂಪತಿ ನಿರ್ಧರಿಸಿದರೆ ಈ ಮಗುವಿಗೆ ಜತೆಯಾಗಿ ಇನ್ನೊಂದು ಮಗು ಇದ್ದರೆ ಒಳ್ಳೆಯದು, ಆಗ ಮಗುವಿನ ಒಂಟಿತನ ದೂರವಾಗುತ್ತದೆ ಎಂದು ಹಿರಿಯರು, ಆಪ್ತರು ಸಲಹೆ ನೀಡಲಾರಂಭಿಸುತ್ತಾರೆ. ಇನ್ನು ಮೊದಲ ಮಗುವಿಗೆ 5-6 ವರ್ಷ ಆಗಿದ್ದರೆ ತನ್ನ ಸ್ನೇಹಿತರನ್ನು ನೋಡಿ ನನಗೆ ತಂಗಿ ಬೇಕು, ತಮ್ಮ ಬೇಕು ಎಂದು ಅನಿಸಿ ಅಪ್ಪ-ಅಮ್ಮನ ಬಳಿ ಹೇಳುತ್ತದೆ, ಎಷ್ಟೋ ದಂಪತಿಗಳು ತಮ್ಮ ಮೊದಲ ಮಗುವಿನ ಒತ್ತಾಯಕ್ಕೆ ಪುನಃ ಗರ್ಭಧಾರಣೆಗೆ ಮನಸ್ಸು ಮಾಡುತ್ತಾರೆ.ಎರಡನೇ ಮಗುವನ್ನು ಬಯಸುವವರು ಕೆಲವರು ಮೊದಲ ಮಗು ಸ್ವಲ್ಪ ದೊಡ್ಡದಾಗಲಿ ನಂತರ ಮಾಡಿಕೊಳ್ಳುವ ಎಂದು ಬಯಸಿದರೆ ಮತ್ತೆ ಕೆಲವರು ಎರಡು ಮಕ್ಕಳ ನಡುವೆ ತುಂಬಾ ಅಂತರ ಬೇಡ ಎಂದು ಬಯಸಿ ಬೇಗ ಮಾಡಿಕೊಳ್ಳುತ್ತಾರೆ. ಹಾಗಾದರೆ ಎರಡನೇ ಮಗು ಮಾಡಿಕೊಳ್ಳಲು ಎಷ್ಟು ಅಂತರವಿದ್ದರೆ ಒಳ್ಳೆಯದು? ಎಂದು ನೋಡೋಣ ಬನ್ನಿ: ಎರಡನೇ ಮಗು ಯಾವಾಗ ಬೇಕು ಎಂದು ನಿರ್ಧರಿಸುವುದು ನಿಮ್ಮ ವೈಯಕ್ತಿಕ ವಿಚಾರ, ಆದರೆ ಎರಡನೇ ಮಗು ಬೇಕೆಂದು ಬಯಸುವ ದಂಪತಿ ಮೊದಲ ಹೆರಿಗೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಎರಡನೇ ಮಗುವಿಗೆ ಪ್ಲಾನ್ ಮಾಡುವುದು ಒಳ್ಳೆಯದು. ಮಕ್ಕಳ ವಯಸ್ಸಿನ ನಡುವೆ ಅಂತರ ಕಡಿಮೆಯಿದ್ದರೆ ಕೆಲವೊಂದು ವಿಷಯದಲ್ಲಿ ಒಳ್ಳೆಯದು, ಕೆಲವೊಂದು ವಿಷಯಕ್ಕೆ ಒಳ್ಳೆಯದಲ್ಲ, ಇನ್ನು ಅಂತರ ಅಧಿಕವಾದರೂ ಮಕ್ಕಳನ್ನು ನಿಭಾಯಿಸುವುದು ಸುಲಭವಾದರೂ ಕೆಲವೊಂದು ಸಮಸ್ಯೆಗಳು ಎದುರಾಗಬಹುದು, ಅವುಗಳೇನು ಎಂದು ನೋಡೋಣ.
Category
🛠️
Lifestyle