• 5 years ago
ಈಗ ವಿಶ್ವದೆಲ್ಲಡೆ ಕೊರೊನಾ ವೈರಸ್‌ದ್ದೇ ಭೀತಿ. ಚೀನಾದಲ್ಲಿ ಹುಟ್ಟಿಕೊಂಡ ಈ ಮಾರಕ ವೈರಸ್‌ ದಕ್ಷಿಣ ಕೊರಿಯಾ, ಇಟಲಿ, ಭಾರತ, ಅಮೆರಿಕಾ ಸೇರಿ ಹಲವಾರು ರಾಷ್ಟ್ರಗಳಿಗೆ ಹರಡಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಕೊರೊನಾ ವೈರಸ್‌ ತಡೆಗಟ್ಟಲು ಜನರು ಮಾಸ್ಕ್ ಮೊರೆ ಹೋಗುತ್ತಿದ್ದಾರೆ, ಸ್ವಚ್ಛತೆಯ ಕಡೆಗೆ ತುಂಬಾ ಗಮನ ಕೊಡುತ್ತಿದ್ದಾರೆ. ಸ್ಯಾನಿಟೈಸರ್‌ ಬಳಸಿ ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ, ಆದರೆ ಜನರು ತಾವು ಬಳಸುವ ಫೋನ್‌ಗಳು ಕೂಡ ವೈರಸ್ ಹರಡುತ್ತವೆ ಎಂಬುವುದನ್ನು ಅರಿಯದೆ ಬರೀ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಎಂದು ತಲೆಕೆಡಿಸಿಕೊಂಡಿದ್ದಾರೆ. ಜರ್ನಲ್‌ ಆಫ್‌ ಹಾಸ್ಪಟಲ್ ಇನ್‌ಫೆಕ್ಷನ್ ಪ್ರಕಾರ ಕೊರೊನಾ ವೈರಸ್ ಹಾಗೂ ಇತರ ಸೂಕ್ಷಾಣು ವೈರಸ್‌ಗಳು ಫೋನ್‌ನಲ್ಲಿ 9 ದಿನಗಳವರೆಗೆ ಬದುಕಿರುತ್ತವೆ. ಫೋನ್‌ನ ಪರದೆ ಹಾಗೂ ಅದರ ಮೆಟಲ್ ಹಾಗೂ ಪ್ಲಾಸ್ಟಿಕ್‌ ಭಾಗಗಳಲ್ಲಿ ವೈರಸ್ ಬದುಕಿಳಿದಿರುತ್ತವೆ. ಟಾಯ್ಲೆಟ್‌ಗೆಹೋಲಿಸಿದರೆ ಫೋನ್‌ನಲ್ಲಿ ಹೆಚ್ಚು ಬ್ಯಾಕ್ಟಿರಿಯಾಗಳು ಕಂಡು ಬರುತ್ತವೆ ಎಂದು ಆ ಹಾಸ್ಪಿಟಲ್ ವರದಿ ಮಾಡಿದೆ. ಆದ್ದರಿಂದ ಸ್ಯಾನಿಟೈಸರ್ ಹಚ್ಚಿ ನೀವೇಷ್ಟೇ ಕೈಗಳನ್ನು ಶುದ್ಧ ಮಾಡಿದರೂ, ಫೋನ್‌ನಲ್ಲಿರುವ ವೈರಸ್‌ ಇದ್ದರೆ ಅದರ ಮೂಲಕವೂ ರೋಗ ಹರಡುತ್ತದೆ. ಆದ್ದರಿಂದ ಕೊರೊನಾ ವೈರಸ್‌ ತಡೆಗಟ್ಟಲು ಪ್ರತಿಯೊಬ್ಬರು ಫೋನ್‌ ಸ್ವಚ್ಛತೆ ಕಡೆಗೂ ಗಮನ ನೀಡಬೇಕಾಗಿದೆ.

Recommended