• 5 years ago
ಪ್ರತಿ ಮಹಿಳೆಯರು ತಮ್ಮ ಗರ್ಭಧಾರಣೆಯ ಸಮಯದಲ್ಲಿ, ಎಲ್ಲಿ ಗರ್ಭಪಾತವಾಗಿಬಿಡುವುದೋ ಎಂಬ ಆತಂಕದಲ್ಲಿರುತ್ತಾರೆ. ಗರ್ಭಪಾತವು ಮಹಿಳೆಯರ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿ ಅವರನ್ನು ಮಾಸಿಕವಾಗಿ ಖಿನ್ನರನ್ನಾಗಿಸುತ್ತದೆ. ಇಂತಹ ಗರ್ಭಪಾತದ ಸಮಸ್ಯೆಯಿಂದ ಪಾರಾಗಲು ಕೆಲವೊಂದು ಆಹಾರಗಳಿಂದ ದೂರವಿದ್ದರೆ ಬಹಳ ಒಳ್ಳೆಯದು. ಎರಡೆರಡು ಬಾರಿ ಗರ್ಭಪಾತವಾದರೆ, ಮುನ್ನೆಚ್ಚರಿಕೆ ಕ್ರಮ ಹೀಗಿರಲಿ ನಮಗೆಲ್ಲರಿಗು ತಿಳಿದಿರುವಂತೆ ಗರ್ಭಧಾರಣೆಯ ಸಮಯವು ಮಹಿಳೆಯರ ಜೀವನದಲ್ಲಿನ ಬಹುಮುಖ್ಯ ಹಂತಗಳಲ್ಲೊಂದು. ಇಂತಹ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹಾಗೂ ಮಗುವಿನ ಭ್ರೂಣದ ಬಗ್ಗೆ ಅತ್ಯಂತ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಒಂದು ಸಣ್ಣ ಉದಾಸೀನತೆಯೂ ಕೂಡ ಭ್ರೂಣದ ಮೇಲೆ ಅಹಿತಕರವಾದಂತಹ ಪರಿಣಾಮ ಬೀರುತ್ತದೆ. ಆರೋಗ್ಯದಲ್ಲಿ ಏರುಪೇರುಂಟಾಗಿ ತಾಯಿ ಹಾಗೂ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಸೂಕ್ತ ಸಲಹೆಗಳು ಉತ್ತಮ ಆಹಾರದ ಅಭ್ಯಾಸವು ತಾಯಿಯ ಆರೋಗ್ಯವನ್ನು ಪೋಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕಾರಣ, ತಾಯಿಯು ಸೇವಿಸುವ ಆಹಾರವು ಭ್ರೂಣದಲ್ಲಿರುವ ಮಗುವಿಗೂ ತಲುಪುತ್ತದೆ. ಹೀಗಾಗಿ ಗರ್ಭಧಾರಣೆಯ ಸಮಯದಲ್ಲಿ ಎಷ್ಟು ಆರೋಗ್ಯಕರವಾದ ಆಹಾರವನ್ನು ಸೇವಿಸುವರೋ ಅಷ್ಟು ತಾಯಿಯ ಆರೋಗ್ಯಕ್ಕೆ ಒಳ್ಳೆಯದು. ಗರ್ಭಧಾರಣೆಯ ಸಮಯದಲ್ಲಿ ಸೇವಿಸಬಾರದಂತಹ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ...

Recommended