ಕೆಜಿಎಫ್' ಚಿತ್ರದ ಯಶಸ್ಸಿನ ಹಿಂದೆ ಹಲವು ಕೈಗಳು ಕೆಲಸ ಮಾಡಿದೆ. ಈ ಪ್ರಮುಖ ಕೈಗಳಲ್ಲಿ ಛಾಯಾಗ್ರಾಹಕ ಭುವನ್ ಗೌಡ ಒಬ್ಬರು. ಡಿಸೆಂಬರ್ 21 ಕೆಜಿಎಫ್ ಸಿನಿಮಾ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಭುವನ್ ಅವರ ಕ್ಯಾಮೆರಾ ವರ್ಕ್ ಅದ್ಭುತವೆನ್ನುತ್ತಿದ್ದಾರೆ. ಎರಡೂವರೆ ವರ್ಷ ತಾನು ಪಟ್ಟ ಪರಿಶ್ರಮಕ್ಕೆ ಜನರ ಕೊಟ್ಟ ಬೆಲೆಯನ್ನ ನೋಡಿ ಭುವನ್ ಗೌಡ ತೀರಾ ಸಂತಸಗೊಂಡಿರುವುದಂತೂ ಸುಳ್ಳಲ್ಲ. ಕೆಜಿಎಫ್ ಚಿತ್ರದ ಯಶಸ್ಸಿಗೆ ಪಾಲುದಾರನಾಗಿದ್ದಕ್ಕೆ ಖುಷಿ ಒಂದು ಕಡೆಯಾದ್ರೆ, ಇಂದು ತಮ್ಮ ಹುಟ್ಟುಹಬ್ಬ ಎನ್ನುವುದು ಇನ್ನೊಂದು ಖುಷಿಯಾಗಿದೆ.
Category
🗞
News