Skip to playerSkip to main contentSkip to footer
  • 12/9/2017
Journalist Sunil Heggaravalli said he was shocked when CCB Police gave first information about Supari Killing. Sunil's version about Supari conspiracy by Hai Bangalore Editor Ravi Belagere

ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರು ತಮ್ಮನ್ನು ಕೊಲ್ಲಲು ಸುಪಾರಿ ನೀಡಿದ್ದರ ಬಗ್ಗೆ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರು ಪ್ರತಿಕ್ರಿಯಿಸಿದ್ದು, ನನಗೆ ಇದು ದೊಡ್ಡ ಶಾಕಿಂಗ್ ಸುದ್ದಿ ಎಂದಿದ್ದಾರೆ.ಖಾಸಗಿ ವಾಹಿನಿ ಜತೆ ಮಾತನಾಡಿದ ಸುನೀಲ್, ಈ ಸುದ್ದಿಯಿಂದ ನಿಮಗೆ ಹೇಗೆ ಶಾಕ್ ಆಗಿದೆಯೋ ಅದೇ ರೀತಿ ನನಗೂ ಶಾಕ್ ಆಗಿದೆ. ನಿನ್ನೆ ತನಕ ಏನೂ ಗೊತ್ತಿರಲಿಲ್ಲ. ನಗರದ ಹಿರಿಯ ಪೊಲೀಸರುಬೆಳಗ್ಗೆ ನನ್ನನ್ನು ಕರೆಸಿ ವಿಷಯ ತಿಳಿಸಿದಾಗ ನಾನು ಕೂಡ ನಂಬೋ ಸ್ಥಿತಿಯಲ್ಲಿ ಇರಲಿಲ್ಲ. ಯಾಕಂದ್ರೆ ರವಿ ಬೆಳಗೆರೆ ನನ್ನನ್ನು ಹತ್ಯೆ ಮಾಡಿಸಲು ಪ್ರಯತ್ನಿಸುತ್ತಾರೆಂದರೆ ನಂಬಲಾರದ ವಿಷಯವಾಗಿತ್ತು ಎಂದರು.ಆದರೆ, ಅವರು ಪ್ರತಿಯೊಂದನ್ನೂ ಕೂಡ ದಾಖಲೆಗಳ ಸಮೇತ ವಿವರಿಸಿದಾಗ, ಹಂತಕನ ಬಗ್ಗೆ ಮಾಹಿತಿ ಕೊಟ್ಟಾಗ, ಅವನು ಈ ಹಿಂದೆಯೂ ಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದಾಗ ಹಾಗೂ ಹಿಂದೆ ನಡೆದ ಘಟನೆಗಳನ್ನು ಪರಾಮರ್ಶಿಸಿದಾಗ ನನಗೂ ಇದು ಸತ್ಯ ಎನಿಸಿದೆ ಎಂದು ಹೇಳಿದರು.

Category

🗞
News

Recommended